ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಹೇಮಂತ್ ಎಂ ರಾವ್ ನಿರ್ದೇಶನದ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮುಖ್ಯ ಪಾತ್ರಧಾರಿಗಳು. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನವನ್ನು ಅದ್ವೈತ ಗುರುಮೂರ್ತಿ ಮತ್ತು ವರುಣ್ ಗೋಲಿ ನಿರ್ವಹಿಸಿದ್ದಾರೆ. == ಕಥಾವಸ್ತು == ಇಬ್ಬರು ವ್ಯಕ್ತಿಗಳ ನಡುವಿನ ಪ್ರೇಮದ ಪರೀಕ್ಷೆ ಮಾಡಿಕೊಳ್ಳುವರು. ಇಬ್ಬರು ದೂರ ಇದ್ದರು ಅವರಿಬ್ಬರ ಪ್ರೀತಿ ಎಂದಿಗೂ ದೂರವಾಗದಂತಹ ಪ್ರೀತಿ ಎಂಬುವುದು ಕಥೆಯಾಗಿದೆ. == ಪಾತ್ರವರ್ಗ == ರಕ್ಷಿತ್ ಶೆಟ್ಟಿ: ಮನು ಪಾತ್ರದಲ್ಲಿ ಅಚ್ಯುತ್ ಕುಮಾರ್ ರುಕ್ಮಿಣಿ ವಸಂತ್: ಪ್ರಿಯಾ ಪಾತ್ರದಲ್ಲಿ ಪವಿತ್ರಾ ಲೋಕೇಶ್: ಪ್ರಿಯಾ ಅಮ್ಮನ ಪಾತ್ರದಲ್ಲಿ ಅವಿನಾಶ್ ಶರತ್ ಲೋಹಿತಾಸ್ವ ಸುರಭಿಯಾಗಿ ಚೈತ್ರ ಜೆ.ಆಚಾರ್ ರಮೇಶ್ ಇಂದಿರಾ ಗೋಪಾಲ ಕೃಷ್ಣ ದೇಶಪಾಂಡೆ == ಧ್ವನಿಮುದ್ರಿಕೆ == ಚರಣ್ ರಾಜ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. == ಬಿಡುಗಡೆ == ಸೈಡ್ ಎ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿದೆ ಮತ್ತು ಸೈಡ್ ಬಿ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ @ ಐ ಎಮ್ ಡಿ ಬಿ